ಅಧ್ಯವಸಾಯ
	ವಿಶಿಷ್ಟರೀತಿಯಲ್ಲಿ ಹುಟ್ಟುವ ಪ್ರತ್ಯಕ್ಷ e್ಞÁನಕ್ಕೆ ಸಾಂಖ್ಯ ದಾರ್ಶನಿಕರು ಕೊಟ್ಟಿರುವ ಪಾರಿಭಾಷಿಕ ಶಬ್ದ.
	ಈ e್ಞÁನದ ವಿಚಾರವಾಗಿ ಎರಡು ಮತಗಳಿವೆ. ಯಾವುದರ ಮಧ್ಯಸ್ಥಿಕೆಯೂ ಇಲ್ಲದೆ ನೇರವಾಗಿ ನಮಗೆ ವಸ್ತುe್ಞÁನ ಉಂಟಾಗುತ್ತದೆ ಎಂಬುದು ಒಂದು ಮತ. ವಸ್ತುe್ಞÁನ ನಮಗೆ ಹಾಗೆ ನೇರವಾಗಿ ಆಗುವುದಿಲ್ಲ, ಅದಕ್ಕೆ ಮಧ್ಯವರ್ತಿಯಾದ ಅಂತಃಕರಣವೃತ್ತಿಗಳ ಸಹಾಯ ಮುಖ್ಯ ಎಂಬುದು ಎರಡನೆಯ ಮತ. ಸಾಂಖ್ಯದರ್ಶನ ಎರಡನೆಯ ಮತವನ್ನು ಸಮರ್ಥಿಸುತ್ತದೆ. ಆ ಮತದ ಪ್ರಕಾರ e್ಞÁನಕ್ಕೆ ತಿಳಿಯುವ ಪುರುಷ, ತಿಳಿಯಬೇಕಾದ ವಸ್ತು ಮತ್ತು ಇವೆರಡಕ್ಕೂ ಮಧ್ಯವರ್ತಿಯಾದ ಅಂತಃಕರಣವೃತ್ತಿ- ಇವು ಮೂರು ಇರಬೇಕು. ಈ ಅಂತಃಕರಣವೃತ್ತಿ ತಿಳಿಯಬೇಕಾದ ವಸ್ತುವಿಗೆ ಸದೃಶವಾದ ಆಕಾರವನ್ನು ಪಡೆಯುತ್ತದೆ. ಈ ಆಕಾರ ಹುಟ್ಟಬೇಕಾದರೆ, ಬುದ್ಧಿಯಲ್ಲಿರುವ ತಮಸ್ ಮತ್ತು ರಜಸ್ ಕರಗಿ, ಸತ್ತ್ವಗುಣ ಮಾತ್ರ ವಿಕಾಸವಾಗಬೇಕು. ಈ ಸತ್ತ್ವಗುಣ ವಿಕಾಸವಾದಾಗಲೇ ನಮಗೆ e್ಞÁನ ಪ್ರಾಪ್ತಿ. ಈ ರೀತಿಯಾಗಿ ಹುಟ್ಟಿದ e್ಞÁನಕ್ಕೆ ಅಧ್ಯವಸಾಯ ಎಂದು ಹೆಸರು.											
(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ